ಯುಎಎನ್ ನಂಬರ್‌ಗೆ ಆಧಾರ್ ಸಂಖ್ಯೆ ಕಡ್ಡಾಯ... ಯಾಕೆ ಗೊತ್ತಾ?

ಶಿವಮೊಗ್ಗದ ಎಪಿಎಫ್‌ಒ ಪ್ರಾದೇಶಿಕ ಕಚೇರಿಗೆ ನೂತನವಾಗಿ ಪಿಎಫ್ ಆಯುಕ್ತರಾಗಿ ನೇಮಕವಾಗಿರುವ ಎ.ಪಿ.ಉನ್ನಿಕೃಷ್ಣನ್ ಅಧಿಕಾರ ಸ್ವೀಕರಿಸಿದ್ದಾರೆ.

ಶಿವಮೊಗ್ಗ ಹಾಗೂ ದಾವಣಗೆರೆ, ಈ ಎರಡೂ ಜಿಲ್ಲೆಗಳ ಕಾರ್ಮಿಕರ ಭವಿಷ್ಯ ನಿಧಿ, ಅಂದರೆ ಇಪಿಎಫ್ ಖಾತೆಗಳನ್ನು ಈ ಕಚೇರಿಯಲ್ಲಿ ನಿರ್ವಹಿಸಲಾಗುತ್ತದೆ. ಯುಎಎನ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ತುಂಬಾ ಅಗತ್ಯ ಮತ್ತು ತುರ್ತಾಗಿದೆ. ನಮ್ಮ ಕಚೇರಿ ವ್ಯಾಪ್ತಿಯಲ್ಲಿ ಶೇಕಡಾ ೯೬ರಷ್ಟು ಯುಎಎನ್ ನಂಬರ್‌ಗಳಿಗೆ ಆಧಾರ್ ನಂಬರ್ ಜೋಡಣೆಯಾಗಿರುವುದು ತುಂಬ ಸಂತದ ವಿಚಾರವಾಗಿದೆ. ಕೂಡಲೇ ಉಳಿದ ಶೇಕಡಾ ೪ರಷ್ಟು ಉದ್ಯೋಗಿಗಳು ತಮ್ಮ ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳುವಂತೆ ಉನ್ನಿಕೃಷ್ಣನ್ ಮನವಿ ಮಾಡಿದ್ದಾರೆ.

ಇನ್ನು ದೇಶಕ್ಕೆ ಸ್ವಾತಂತ್ರ ಬಂದು ೭೫ ವರ್ಷಗಳಾಗಿರುವ ಹಿನ್ನೆಲೆ ಅಮೃತ ಮಹೋತ್ಸವದ ಪ್ರಯುಕ್ತ ಆಧಾರ್ ಆಧರಿತ ಇ - ನಾಮಿನೇಶನ್ ಹೆಚ್ಚಿಸಲು ವಿಶೇಷ ಅಭಿಯಾನವನ್ನು ಇಪಿಎಫ್‌ಒ ಆರಂಭಿಸಿದೆ. ಕಾರ್ಮಿಕರ ಭವಿಷ್ಯ ನಿಧಿ ಖಾತೆಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಹಿಂದೆಯೂ ಎರಡು ಬಾರಿ ಈ ಗಡುವನ್ನು ಮುಂದೂಡಲಾಗಿದ್ದು, ನಿನ್ನೆಗೆ ಗಡುವು ಅಂತ್ಯವಾಗಿದೆ. ಒಂದು ವೇಳೆ ನಿಮ್ಮ ಆಧಾರ್ ಲಿಂಕ್ ಆಗದೇ ಇದ್ದರೆ ಕಂಪನಿಗಳು ನೀಡುತ್ತಿರುವ ಭವಿಷ್ಯ ನಿಧಿ, ಖಾತೆಗೆ ಜಮೆಯಾಗುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು.